Thursday, 9 February 2012

ನಗುವುದೋ, ಅಳುವುದೋ ನೀವೇ ಹೇಳಿ ............

ಮೂರ್ನಾಲ್ಕು ದಿನಗಳಿಂದ ನಮ್ಮ ಟಿವಿ ಮಾಧ್ಯಮಗಲಿಗೆ ಹಬ್ಬವೋ ಹಬ್ಬ, ಬಹಳ ಬ್ಯುಸಿ. ಪ್ರತಿನಿತ್ಯದ ಕಾರ್ಯಕ್ರಮಗಳಾದ, ಪರಮ "ಪವಿತ್ರ ಜ್ಯೋತಿಷ್ಯ" ಕ್ರೀಡಾ ಕಾರ್ಯಕ್ರಮ "ಸಿಕ್ಸರ್" ನಂತಹ ಕಾರ್ಯಕ್ರಮಗಳನ್ನು ಪಕ್ಕಕ್ಕೆ ಇಟ್ಟು
ಸೆಕ್ಸ್ (ನೀಲಿ) ಚಿತ್ರಗಳದ್ದೇ ಕಾರುಬಾರು ವರದಿಗಾರರು, ವಾಚಕರಿಗೂ ಬಿಡುವಿಲ್ಲದ ಕೆಲಸ.
ಮನೆಯ ಮಂದಿಗೆಲ್ಲಾ,  ನಗರ, ಗ್ರಾಮೀಣ ಪ್ರದೇಶದಲ್ಲಿರುವ ಸಣ್ಣ ಮಕ್ಕಳಿಂದ ಹಿಡಿದುಮುದುಕರ ವರೆವಿಗೂ ಸೆಕ್ಸ್ ಚಿತ್ರಗಳ ಬಗ್ಗೆ ಅಷ್ಟಾಗಿ ತಿಳುವಳಿಕೆ ಇಲ್ಲದ ಜನರಿಗೂ ಅದು ಎಲ್ಲಿಂದ ಡೌನ್ ಲೋಡ್ ಮಾಡಬೇಕು ಹೇಗೆ ಮಾಡಬೇಕು. ಇಂಟರ್ ನೆಟ್ ಅಂದರೇನು? ಮೊಬೈಲ್ ನಲ್ಲಿ ಹೇಗೆ ಸೆಕ್ಸ್ ಸಿನಿಮಾ ನೋಡಬಹುದು ಎಂಬ ಅಷ್ಟೂ ಸತ್ಯವನ್ನು ಜನರೆದುರು ಬಿಚ್ಚಿಟ್ಟಿದ್ದಾರೆ. 
ಎರಡು ದಿನಗಳು ನಾವೇ ಈ ಸೆಕ್ಸ್ ಚಿತ್ರವನ್ನು ಸೆರೆ ಹಿಡಿದಿದ್ದು ಅಂತ ಪೈಪೋಟಿಗೆ ಬಿದ್ದಿದ್ದಾವೆ. 
ಸಾಲದಕ್ಕೆ ಮೂರನೇಯ ದಿನವೂ ಸಹ ಬೆಳಿಗ್ಗೆ "ನಾರಿಯರೇ ನೀವೇನು ಹೇಳ್ತಿರಾ? ಎಂಬ 2 ಗಂಟೆ ಕಾರ್ಯಕ್ರಮದಲ್ಲಿ "ಫ್ಯಾಷನ್ ಲೋಕದ ರೂಪಶ್ರೀ ಎಂಬ ನಟಿಯೊಡನೆ ಚರ್ಚೆ ಪ್ರಸಾರ ಫೋನ್ ಇನ್ ಕಾರ್ಯಕ್ರಮವೂ ನಡೆಯಿತು. 
***************

ಇದೇ ವಾಹಿನಿಯವರು "ಮದನಾರಿ" ಎಂಬ ಕಾರ್ಯಕ್ರಮವನ್ನು ವಾರದಲ್ಲಿ ಮೂರ್ನಾಲ್ಕು ಬಾರಿ ಪ್ರಸಾರ ಮಾಡುತ್ತಾರೆ. ಇದರ  ಉದ್ದೇಶ ವೇನು ? ಚಿತ್ರ ನಟಿಯವರ "ಮಾದಕ ಮೈಮಾಟದ ಪ್ರದರ್ಶನ" ಹಾಗೂ ಅವರ ವೈಯಕ್ತಿಕ  ವರ್ಣರಂಜಿತ  ಬದುಕಿನ ಬಗ್ಗೆ ವಾಹಿನಿಯ ಮಹಿಳಾ ನಿರೂಪಕಿಯೊಬ್ಬರು ನಡೆಸಿಕೊಡುತ್ತಾರೆ. ಇಲ್ಲಿ ತೋರಿಸುವುದು ಏನನ್ನು ? ಅಶ್ಲೀಲತೆ, ಹೆಣ್ಣಿನ ಅರೆ ಬರೆ ಬೆತ್ತಲೆ, ದೇಹದ ಉಬ್ಬು ತಗ್ಗುಗಳ  ಪ್ರದರ್ಶನ  ಇವೇ ತಾನೇ ? ಇಲ್ಲಿ ಕಾಣುವುದಿಲ್ಲವೇ ಅಶ್ಲೀಲತೆ ಇಲ್ಲಿ ಪ್ರಚೋದನೆಯ ಚಿತ್ರಗಳು ಧಾರಾಳವಾಗಿ ವೀಕ್ಷಕರಿಗೆ ಉಣ ಬಡಿಸುತ್ತಿದ್ದಾರಲ್ಲ.  ಇದಕ್ಕೇನನ್ನ ಬೇಕು.
***************
ಮೊಬೈಲ್ ಕ್ಲಿಪ್ಪಿಂಗ್ ಗಿಂತಲೂ ಅಸಹ್ಯಕರವಾದ ಚಿತ್ರಗಳನ್ನು ತೋರಿಸುವುದನ್ನು ಗಂಟೆಗಟ್ಟಲೇ ವಾಹಿನಿಯಲ್ಲಿ ಕುಳಿತು ಮಾತಾನಾಡುವ "ಜನವಾದಿ ಮಹಿಳಾ ಸಂಘದ ಅಧ್ಯಕ್ಷರಾದ ವಿಮಲಾರಂತಹ ಮಹಿಳೆಯರ ಕಣ್ಣಿಗೆ ಬೀಳುವುದಿಲ್ಲವೇ?"
ಅದರ ಬಗ್ಗೆ ಅವರು ಯಾಕೆ ತಲೆ ಕೆಡಿಸಿಕೊಳ್ಳುತ್ತಾರೆ. 

ಮೂರ್ನಾಲ್ಕು ದಿನಗಳಲ್ಲಿ ತೋರಿಸುತ್ತಿರುವ ಸೆಕ್ಸ್ ಚಿತ್ರಗಳಿಗೂ "ಇವರ ಅಧಿಕೃತ *ಮದನಾರಿ* ಯಾವ ವ್ಯತ್ಯಾಸ ಹೇಳಿ?
**********************

ಇನ್ನೊಂದು ಜಾಹೀರಾತು 
 
ನಮ್ಮ ಕನ್ನಡ ಹೆಮ್ಮೆಯ ವಿಶ್ವೇಶ್ವರ ಭಟ್ ರ  ಸುವರ್ಣವಾಹಿನಿ ಯಲ್ಲಿ
ತಮಿಳುನಾಡಿನ ಧನುಷ್ ಎಂಬ ನಟನ ಕೊಲೆವರಿ ಚಿತ್ರದ 
 12-2-2012 ರಂದು ಪ್ರಮೋಷನ್ ಗೆ ಬೆಂಗಳೂರಿಗೆ ಬರುತ್ತಿದ್ದಾರಂತೆ . ಅವರಿಗೆ ಈ ಮಹಾನುಭವರೇ, ಆತಿಥ್ಯವನ್ನು ನೀಡಿ ತಮ್ಮ  ವಾಹಿನಿಯಲ್ಲಿ ಇದರ ಬಗ್ಗೆ ಕಾಳಜಿ ವಹಿಸಿಕೊಂಡು ಇವರ ಸಹಯೋಗದೊಂದಿಗೆ  ಚಿತ್ರದ ಬಗ್ಗೆ ಪ್ರಚಾರ ಮಾಡುತ್ತಾರಂತೆ. ಎಂತಹ ದುರ್ಭಾಗ್ಯ ನಮ್ಮ ಕನ್ನಡಿಗರದ್ದು. ನಮ್ಮ ಕನ್ನಡ ತಾಯಿಗೆ ಹರಕಲು ಸೀರೆ  ಉಡಿಸಿ, ಬೇರೆ ಮನೆಯ ತಾಯಿಗೆ ರೇಷ್ಮೇ ಸೀರೆ ಉಡಿಸಲು ಹೊರಟಿದ್ದಾರೆ. ನಮ್ಮ ಮಹಾನ್ ಕನ್ನಡ ಮಾಧ್ಯಮ ಮಿತ್ರರು.
 ಪ್ರತಿನಿತ್ಯ ಕನ್ನಡ ಅಕ್ಷರಗಳ  ಕಾಗುಣಿತಗಳನ್ನು ಎಷ್ಟು ಸಾಧ್ಯವೋ ಅಷ್ಟನ್ನೂ ತಪ್ಪುಗಳನ್ನು ಮಾಡುತ್ತಾ ಕನ್ನಡವನ್ನು ಕೊಲೆ ಮಾಡುತ್ತಿರುವ  ನಮ್ಮ ಮಾಧ್ಯಮ ಮಿತ್ರರಿಗೆ ಈಗ ಪರಭಾಷಿಕರ "ಕೊಲೆವರಿ ಡಿ" ಯ ಮೇಲೆ ವ್ಯಾಮೋಹ ಹೆಚ್ಚಾಗಿದೆ.
ಈಗಾಗಲೇ ಕನ್ನಡಕ್ಕೆ ರಾಜಧಾನಿಯಲ್ಲಿ ಎಂತಹ ಸ್ಥಿತಿ ಇದೆ ಅನ್ನೋದು ಎಲ್ಲರಿಗೂ ತಿಳಿದಿದೆ. ಪರಬಾಷಿಕರು ಅಟ್ಟಹಾಸದಿಂದ ತಮ್ಮ ತಮ್ಮ ಭಾಷೆಗಳನ್ನು ಅಧಿಕೃತವಾಗಿ ಬಳಸುತ್ತಿದ್ದಾರೆ. 

ಇಂತ ಹ  ಪರಿಸ್ಥಿತಿಯಲ್ಲಿ ನಮ್ಮ ಕನ್ನಡಿಗರಿದ್ದಾರೆ , ಕನ್ನಡ  ಉಳಿಸಿ, ಬೆಳಸಬೇಕಾದ ನಮ್ಮ ಮಾಧ್ಯಮಗಳೇ ಈ ರೀತಿ ಪರಭಾಷೆಯ ವ್ಯಾಮೋಹಕ್ಕೆ ಬಿದ್ದು ಬಿಟ್ಟರೆ ಕನ್ನಡಕ್ಕೆ ಎಲ್ಲಿದೆ  ಉಳಿಗಾಲ ?

ಇತ್ತ ಮದನಾರಿಯಂತಹ  ಪ್ರಚೋದನಾಕಾರಿ  ಮಕ್ಕಳು ಇದೇನಿದೂ ಅಂತ  ಪ್ರಶ್ನಾರ್ಥ ಪ್ರಶ್ನೆಗಳನ್ನು ಕೇಳುವ ಕಾರ್ಯಕ್ರಮ ಗಳ ಜೊತೆಗೆ ಪರಬಾಷೆಯ ವ್ಯಾಮೋಹವನ್ನು ಕಡಿಮೆ ಮಾಡುವ ಕಡೆ ಗಮನಹರಿಸಿದರೆ ನಮ್ಮ ಕನ್ನಡಿಗರು ಉಳಿದುಕೊಂಡಾರು!!

ನೋಡ್ತಾ ಇರಿ ಏನೇನ್ ಮಾಡ್ತೀವಿ ಅಂತ ಹೊರಟಿರುವ ನಮ್ಮ ಅಚ್ಚಕನ್ನಡದ ಅನುಭವಿ ಪತ್ರಕರ್ತರಾದವರಿಗೆ ಅರ್ಥವಾಗುತ್ತೆ  ಅಂತ ದುರ್ಭಾಗ್ಯ ಕನ್ನಡಿಗರ ಆಶಾಭಾವನೆ. 


ಇದು ನ್ಯಾಯವೇ ????

ರಾಜು ವಿನಯ್ ದಾವಣಗೆರೆ

1 comment: